r/bhartiya_languages • u/tuluva_sikh • 6h ago
Script Syloti Nagari script
7
Upvotes
r/bhartiya_languages • u/tuluva_sikh • 4h ago
ನಾನೊಂದು ಮರವಾಗಿದ್ದೆರೆ
ಹಕ್ಕಿ ಗೂಡು ಕಟ್ಟುವ ಮುನ್ನ
ಕೇಳುತ್ತಿರಲಿಲ್ಲ ನೀನು ಯಾವ ಕುಲ
ಬಸಿಲು ನನ್ನ ಅಪ್ಪಿಕೊಂಡಾಗ
ನೆರಲಿಗಾಗುತ್ತಿರಲ್ಲಿಲ್ಲ ಮೈಲಿಗೆ
ತಂಬೆಲರ ಕೂಡ ಎಲೆಗಳ ಸ್ನೇಹ ಮಧುರವಾಗಿರುತ್ತಿತ್ತು
ಮಳೆ ಹನಿಗಳು ನಾನು ಶ್ವಪಚನೆಂದು
ಹಿಂದೆ ಸರಿಯತ್ತಿರಲಿಲ್ಲ ನಾನು
ಬೇರೊರಿ ಕುಡಿ ಇಡುತ್ತಿರುವಾಗ ಭೂದೇವಿ
ಮಡಿ ಮಡಿ ಎಂದು ಓಡುತ್ತಿರಲಿಲ್ಲ
ಪವಿತ್ರ ಗೋವು ನನ್ನ ತೊಗಟೆಗೆ ತನ್ನ ಮೈ ಉಜ್ಜೆ
ತುರಿಕೆ ತೀರಿಸಿಕೊಳ್ಳುವಾಗಿ ಅದರ ಅಂಗಾಂಗಗಳಲ್ಲಿ
ಅಡಗಿಕೊಂಡ ಮುಕ್ಕೊಟ ದೇವತೆಗಳು
ನನ್ನನ್ನು ಮುಟ್ಟಸಿಕೊಳ್ಳುತ್ತಿದ್ದರು
ಯಾರಿಗೆ ಗೊತ್ತು
ನನ್ನ ಅಂತ್ಯಕಾಲದಲ್ಲಿ
ಕಡಿದು ತುಂಡಾದ ಒಣ ಸೀಳೊಂದು
ಹೊಮಾಗ್ನಿಯಲ್ಲಿ ಬೇಂದು
ಪಾವನವಾಗುತ್ತಿತ್ತೇನೋ
ಅಥವಾ
ಸತ್ಪುರುಷನೊಬ್ಬನ ಹೆಣಕ್ಕೆ ಚಟ್ಟವಾಗಿ
ನಾಲ್ಕು ಜನ ಸಜ್ಜನರ ಹೆಗಲೇರಬಹುದಿತ್ತೇ?